ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದವರು ಇವರೇ ನೋಡಿ

0
31

ಕನ್ನಡದ ಬಿಗ್ ಬಾಸ್ ಸೀಸನ್ 7ರ ಅಂತಿಮ 2 ವಾರಗಳ ಆಟಕ್ಕೆ ಬಂದು ನಿಂತಿದೆ ಸದ್ಯ ಮನೆಯಲ್ಲಿರುವವರಿಗೆ ಈ ವಾರ ಯಾರು ಹೊರಹೋಗಲಿದ್ದಾರೆ ಎಂಬ ಚಿಂತೆಯೂ ಇದೆ,ಸದ್ಯ ಮನೆಯ ಮಂದಿಗೆ ದಿನಕ್ಕೊಂದಂತೆ ಶಾಕ್ ಗಳು ಸಿಗುತ್ತಿವೆ,ಸದ್ಯ ಈ ವಾರ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಇದೆ,ಕಳೆದ ವಾರ ಎಲಿಮಿನೇಷನ್ ಇರಲಿಲ್ಲ,ನೆನ್ನೆಯ ವಾರದ ಕಥೆ ಕಿಚ್ಚನ ಜೋತೆ ಕಾರ್ಯಕ್ರಮದಲ್ಲಿ ಒಬ್ಬರನ್ನ ಮನೆಯಿಂದ ಹೊರ ಬರುವಂತೆ ಹೇಳಿದ್ದಾರೆ.

ಕಳೆದ ವಾರ ನೋ ಎಲಿಮಿನೇಷನ್ ಹಿನ್ನೆಲೆಯಲ್ಲಿ ಸ್ವಲ್ಪ ನಿರಾಳರಾಗಿದ್ದ ಬಿಗ್​ ಬಾಸ್​ ವೀಕ್ಷಕರು, ಈ ಸಲ ಯಾಱರು ಮನೆಯಿಂದ ಹೊರ ಹೋಗ್ತಾರೆ ಅಂತಾ ಕ್ಯೂರಿಯಾಸಿಟಿಯಿಂದ ಕಾಯ್ತಿದ್ದ ಕ್ಷಣಕ್ಕೆ ತೆರೆ ಬಿದ್ದಿದೆ,ವಾರಂತ್ಯದ ಮಾತುಕತೆಯಲ್ಲಿ ಮನೆಯ ಸದಸ್ಯರಿಗೆ ಎದೆ ಢವ ಢವ ಎನಿಸುವ ಕ್ಷಣ ಎದುರಾಗಿತ್ತು ಸದ್ಯ ಭೂಮಿ ಶೆಟ್ಟಿ, ಚಂದನ್ ಆಚಾರ್, ದೀಪಿಕಾ ದಾಸ್, ಹರೀಶ್ ರಾಜ್, ಕಿಶನ್, ಕುರಿ ಪ್ರತಾಪ್ ಮತ್ತು ಪ್ರಿಯಾಂಕ ಶೈನ್ ಶೆಟ್ಟಿ ಸೇರಿದಂತೆ ಮನೆಯ ಎಲ್ಲಾ ಸದಸ್ಯರೂ ನಾಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಮನೆಯಿಂದ ಈ ವಾರ ಕಿಶನ್ ಔಟ್ ಆಗಿದ್ದಾರೆ.ಕಿಶನ್ ಎಲಿಮಿನೇಟ್ ಆಗಿದ್ದಾರೆ ಅಂತ ಕಿಚ್ಚ ಸುದೀಪ್ ಘೋಷಣೆ ಮಾಡ್ತಿದ್ದ ಹಾಗೆಯೇ ಮನೆ ಮಂದಿಗೆಲ್ಲಾ ಕಿಸ್ ಕೊಟ್ಟು ಕಿಶನ್ ಮನೆಯಿಂದ ಹೊರ ಬಂದ್ರು ಇದಕ್ಕೂ ಮೊದಲು ಉಳಿದವರು ಸೇಫ್ ಆದರು ಆದರೆ ಡಬಲ್ ಎಲಿಮಿನೇಷನ್ ಇರುವುದರಿಂದ ಇನ್ನೂ ಒಬ್ಬರೂ ಹೊರ ಬರಲಿದ್ದಾರೆ.98 ದಿನಗಳ ಕಾಲ ಬಿಗ್​ಬಾಸ್​ ಮನೆಯಲ್ಲಿದ್ದ ಕಿಶನ್, ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಜೊತೆಗೆ ಮನೆಯಲ್ಲಿದ್ದವರೆಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದರು.ಕಿಶನ್ ಅವರ ಎಲಿಮಿನೇಷನ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ

LEAVE A REPLY

Please enter your comment!
Please enter your name here