ಶನಿದೇವರ ವಕ್ರದೃಷ್ಟಿಯಿಂದ ಪಾರಾಗೋದು ಹೇಗೆ!ತಪ್ಪದೇ ಓದಿ

0
11

ಆಧಿ ದೈವ,ಪ್ರಥಮ ಪೂಜಿತ,ವಿಜ್ಞರಾಜ ಹೀಗೆ ನಾನಾ ಹೆಸರಿಂದ ಕರೆಸಿಕೊಳ್ಳುವ ಗಣೇಶನನ್ನು ಪೂಜಿಸಿದರೆ ಶನಿ ಮಹಾತ್ಮನ ಕಾಟ ಇರುವುದಿಲ್ಲವಾ?ನಮ್ಮ ಪುರಾಣ ಕಥೆಗಳ ಪ್ರಕಾರ ಇರುವ 330 ಕೋಟಿ ದೇವರುಗಳಲ್ಲಿ ಪ್ರಥಮ ಪೂಜೆ ಗಣೇಶನಿಗೆ ನಡೆಯಲು ಕಾರಣ ಏನು ?ಇಷ್ಟಕ್ಕೂ ಗಣೇಶನನ್ನು ಗರಿಕೆಯಿಂದ ಪೂಜಿಸುವುದು ಯಾಕೆ ?ದೇವ ದೇವನನ್ನು ಬಿಡದ ಶನಿಮಹಾತ್ಮ ಗಣೇಶನನ್ನು ಏನೂ ಮಾಡದೆ ಇದ್ದದ್ದು ಯಾಕೆ?ಈ ವಿಚಾರಗಳ ಬಗ್ಗೆ ನಮ್ಮ ಇಂದಿನ ಲೇಖನದಲ್ಲಿ ತಿಳಿಯೋಣ.

ಶನೇಶ್ಚರ,ಶನಿದೇವ,ಶನಿಮಹಾತ್ಮ ಅವನ ಹೆಸರನ್ನು ಕೇಳಿದರೂ ಸಾಕು ಕೇವಲ ಮಾನವರು ಮಾತ್ರವಲ್ಲ ದೇವಾನುದೇವತೆಗಳೇ ಹೆದರಿ ಹೋಗ್ತಿದ್ರು ಅನ್ನುವುದನ್ನು ನಾವು ಕೇಳಿದ್ದೀವಿ.ಕರ್ಮಫಲದಾತಾ ಅನ್ನಿಸಿಕೊಂಡ ಶನಿಮಹಾತ್ಮ ನಿಂದ ತೊಂದರೆಗೊಳಗಾಗದೆ ಉಳಿದುಕೊಂಡವರು ಇಬ್ಬರು ಮಾತ್ರ,ಅವರಲ್ಲಿ ಒಬ್ಬ ಆದಿ ಪೂಜಿತ ಗಣೇಶ ಹಾಗೂ ಮತ್ತೊಬ್ಬ ಭಜರಂಗ ಬಲಿ ಹನುಮಾನ್.ಗಣಪತಿಯನ್ನು ಶನಿದೇವರು ಏನು ಮಾಡಲಿಲ್ಲ ಏಕೆ ?ಗಣೇಶನನ್ನು ಪೂಜಿಸಿದರೆ ಶನಿ ದೇವನ ಕಾಟ ತಪ್ಪುತ್ತೆ ಅನ್ನೋದು ಯಾಕೆ ?ಈ ಎಲ್ಲ ಪ್ರಶ್ನೆಗಳಿಗೆ ಉತ್ತರಕ್ಕೆ ಸಣ್ಣದೊಂದು ಕಥೆಯನ್ನು ಹೇಳ್ತೀವಿ ಕೇಳಿ.

ಓಂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544 .

ಒಂದು ದಿನ ವಿಹಾರಕ್ಕೆಂದು ಹೊರಟಿದ್ದ ಮುದ್ದು ಗಣೇಶ ಆಕಸ್ಮಿಕವಾಗಿ ಶನಿ ರಾಜನಿಗೆ ಎದುರಾಗುತ್ತಾನೆ,ಮುದ್ದು ಮುದ್ದಾಗಿ ಕಾಣುತ್ತಿದ್ದ ಗಣಪತಿಯನ್ನು ನೋಡಿದ ಶನಿ ರಾಜನಿಗೆ ಗಣಪತಿಯನ್ನು ಸ್ವಲ್ಪ ಕಾಡುವ ಮನಸ್ಸಾಗುತ್ತೆ ಹೀಗಾಗಿ ಶನಿರಾಜ ಗಣಪತಿಯ ಕಡೆ ಬರ್ತಾನೆ.ಗಣೇಶ ಶಿವ ಪಾರ್ವತಿಯರ ಪುತ್ರ,ತನ್ನ ತಾಯಿಗೆ ಕೊಟ್ಟ ಮಾತಿನಂತೆ ಪರಶಿವನನ್ನೇ ಎದುರಿಸಿ ನಿಂತವನು,ಆದಿ ದೇವ ಅಂತವನು ಶನಿ ಮಹಾತ್ಮನಿಗೆ ಹೆದರ್ತಾನಾ?

ಗಣೇಶ ಕೂಡ ಶನಿದೇವನನ್ನು ಸ್ವಲ್ಪ ಆಟ ಆಡಿಸಬೇಕು ಅಂದುಕೊಳ್ತಾನೆ ಹೀಗಾಗಿ ಶನಿ ಮಹಾತ್ಮನನ್ನು ಕಂಡ ಕೂಡಲೇ ಅಲ್ಲಿಂದ ಓಡುವುದಕ್ಕೆ ಶುರು ಮಾಡ್ತಾನೆ.ಶನಿದೇವ ಎಷ್ಟೇ ಬೇಗ ಓಡಿಬಂದರೂ ಗಣೇಶ ಓಡುವುದನ್ನು ನಿಲ್ಲುವುದಿಲ್ಲ.ಇತ್ತ ಶನಿ ರಾಜನಿಗೆ ಕೋಪ ಹೆಚ್ಚಾಗುತ್ತದೆ,ಏನಾದ್ರೂ ಮಾಡಿ ಗಣಪತಿನಾ ಹಿಡಿದೇ ತೀರಬೇಕು ಅಂತ ಶನಿರಾಜ ಕೂಡ ದೊಡ್ಡ ಹೆಜ್ಜೆ ಹಾಕ್ತಾನೆ,ಹೀಗೆ ಓಡ್ತಾ ಇದ್ದ ಗಣೇಶ ತನ್ನ ಮುಂದೆ ಹುಲ್ಲು ಮೇಯುತ್ತಿದ್ದ ಹಸುವನ್ನು ನೋಡ್ತಾನೆ,

ತಕ್ಷಣ ಆ ಹಸುವಿನ ಮುಂದೆ ಗರಿಕೆಯಾಗಿ ಬದಲಾಗಿ ಹೋಗ್ತಾನೆ ಗಣಪ .ಹೀಗೆ ಗರಿಕೆಯಾಗಿ ಬದಲಾದ ಗಣಪನನ್ನು ಶನಿರಾಜ ಗುರುತಿಸುತ್ತಾನೆ,ಇನ್ನೇನು ಅವನನ್ನು ಹಿಡಿಬೇಕು ಅನ್ನುವಷ್ಟರಲ್ಲಿ ಹಸು ಆ ಗರಿಕೆಯನ್ನು ತಿಂದು ಬಿಡುತ್ತದೆ.ಅಲ್ಲಿಗೆ ಗಣಪತಿ ಹಸುವಿನ ಒಡಲು ಸೇರ್ತಾನೆ,ಈಗ ಅಲ್ಲಿಂದ ಹೊರಗೆ ಬರುವುದು ಹೇಗೆ ಅಂತ ಗಣಪತಿ ಯೋಚಿಸುತ್ತಾನೆ.ಸ್ವಲ್ಪ ಸಮಯದ ನಂತರ ಗಣಪ ಹಸುವಿನ ಸಗಣಿಯ ಮೂಲಕ ಹೊರಬರ್ತಾನೆ,ಇದನ್ನು ಗಮನಿಸಿದ ಶನಿರಾಜ ಸಗಣಿ ರೂಪದಲ್ಲಿದ್ದ ಗಣಪನನ್ನು ಹಿಡಿಯುವುದು ಹೇಗೆ ಅಂತ ಯೋಚಿಸ್ತಾನೆ.ಅಲ್ಲಿಗೆ ಗಣೇಶ ಕೊನೆಗೂ ಶಾನಿದೇವನ ಕೈಗೆ ಸಿಗುವುದಿಲ್ಲ.

ಇನ್ನು ಈ ಕಾರಣದಿಂದ ಸಗಣಿ ರೂಪದಲ್ಲಿದ್ದ ಗಣಪನಿದ್ದ ಕಡೆ ಶನಿರಾಜ ಬರುವುದಿಲ್ಲ ಅಂತಲೇ ಶುಭ ಕಾರ್ಯಗಳು ಮಾಡುವಂತಹ ಸಮಯದಲ್ಲಿ,ಶನಿಮಹಾತ್ಮ ವಕ್ರ ದೃಷ್ಟಿ ಬೀಳದಿರಲಿ ಅನ್ನೋ ಕಾರಣಕ್ಕೇನೇ ಸಗಣಿ ಮತ್ತು ಗರಿಕೆಯಲ್ಲಿ ಗಣಪನನ್ನು ಮಾಡಿ ಪೂಜಿಸುವುದು.ಈ ಕಥೆ ನಿಜಾನಾ ಅಥವಾ ಕಾಲ್ಪನಿಕನಾ ಪ್ರಶ್ನೆ ಇಲ್ಲಿ ಅಪ್ರಸ್ತುತ ಆದ್ರೆ ಗರಿಕೆಯಲ್ಲಿ ಅತ್ಯದ್ಭುತವಾದ ಔಷಧೀಯ ಗುಣಗಳಿವೆ .

ಅಜೀರ್ಣ ಸಂಬಂಧಿ ಕಾಯಿಲೆಗಳಿಗೆ ಗರಿಕೆ ಒಳ್ಳೇ ಔಷಧಿ ಅಷ್ಟೇ ಅಲ್ಲ ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟಲ್ ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತವೆ.ಗೋವಿನ ಸಗಣಿ ಬಗ್ಗೆ ನಿಮಗೆ ಹೇಳಬೇಕಾಗೇ ಇಲ್ಲ ಅದು ಆ್ಯಂಟಿ ಬ್ಯಾಕ್ಟೀರಿಯಲ್,ಆ್ಯಂಟಿ ಆರ್ಸೆನಿಕ್ ಕೂಡ.ಹಿಂದೆ ಜಮೀನುಗಳಿಗೆ ಕೆಮಿಕಲ್ ಔಷಧಗಳನ್ನು ಸಿಂಪಡಿಸಿದ ನಂತರ ಸಗಣಿಯನ್ನು ಹಚ್ಚಿಕೊಂಡು ಕೈತೊಳೆದುಕೊಳ್ಳುವ ಪದ್ಧತಿ ಇತ್ತು,ಹೀಗೆ ಮಾಡುವುದರಿಂದ ಕೆಮಿಕಲ್ ನಲ್ಲಿನ ವಿಷಯುಕ್ತ ಅಂಶ ನಾಶವಾಗುತ್ತಿತ್ತು.

ಇನ್ನು ಸಗಣಿಯಿಂದ ಸಾರಿಸಿದ ನೆಲದ ಮೇಲೆ ಮಲಗಿದರೆ ಬೆನ್ನುನೋವು ವಾಸಿಯಾಗುತ್ತದೆ ಎನ್ನೋದು ನಿಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತಿದೆ ?ಹೀಗಾಗಿ ನಮ್ಮ ಆರೋಗ್ಯವನ್ನು ಕಾಪಾಡುವ ಈ ಎರಡು ವಸ್ತುಗಳ ಬಗ್ಗೆ ನಮಗೆ ಗೌರವ ಬರುವುದಕ್ಕೆ ನಂಬಿಕೆ ಹುಟ್ಟುವುದಕ್ಕೆ ನಮ್ಮ ಪೂರ್ವಜರು ಪುರಾಣ ಕಥೆಯ ಮೂಲಕ ನಮಗೆ ತಿಳಿಸುವ ಪ್ರಯತ್ನ ಮಾಡಿರುವ ಸಾಧ್ಯತೆ ಇರುತ್ತೆ .ನಮ್ಮ ಪ್ರತಿ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣಗಳಿವೆ.ನಮ್ಮ ಪುರಾಣದ ಪ್ರತಿಕಥೆಯ ಹಿಂದು ಸೈನ್ಸ್ ಆಚರಣೆಗೆ ತರೋ ಹಾಗೆ ಮಾಡೋ ಪ್ರಯತ್ನ ಇದೆ.

ಓಂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544 .

LEAVE A REPLY

Please enter your comment!
Please enter your name here