ಅಡುಗೆ ಮನೆಯಲ್ಲಿ ಉಪ್ಪು ಅರಿಶಿನ ಒಟ್ಟಿಗೆ ಇಡಬಾರದು ಯಾಕೆ ಗೊತ್ತಾ!

0
19

ಅಡುಗೆ ಮನೆಯನ್ನು ನಮಗೆ ಬೇಕಾದ ಹಾಗೆ ರೂಪಿಸಿಕೊಳ್ಳುತ್ತೇವೆ ಆದರೆ ಮನೆಯಲ್ಲಿ ಅಡುಗೆ ಮನೆ ಆಗ್ನೇಯ ಭಾಗದಲ್ಲಿದ್ದರೆ ಶುಭವಾಗುತ್ತದೆ.ಅಡುಗೆ ಅಥವಾ ಅಗ್ನಿ ಗೃಹ ಆವರಣದಲ್ಲಿ ಅಗ್ನಿ ಸ್ಥಾನವಾದ ಆಗ್ನೇಯದಲ್ಲಿಯೆ ಇರಬೇಕು.ನಾವು ಯಾವುದರ ಮೇಲೆ ಅಡುಗೆ ಮಾಡುತ್ತೇವೆಯೋ ಅದು ದಕ್ಷಿಣ ಅಥವಾ ಉತ್ತರ ಗೋಡೆಗೆ ತಾಕದ ಹಾಗೆ ನೋಡಿಕೊಳ್ಳಬೇಕು.ಹಾಗೆಯೇ ಸ್ಟವ್ ಹೊರಗಡೆ ಕಾಣುವ ಹಾಗೆ ಇಟ್ಟುಕೊಳ್ಳುವುದು ಒಳ್ಳೆಯದಲ್ಲ.

ಸ್ಟವ್ ಹತ್ತಿರ ಪಂಪ್ ಗಳು,ಸಿಂಕ್ಗಳು ,ಇರದ ಹಾಗೆ ನೋಡಿಕೊಳ್ಳಬೇಕು.ಆಗ್ನೇಯದಲ್ಲಿ ನೀರಿನ ಬಳಕೆ ಎಷ್ಟು ಕಡಿಮೆ ಇದ್ದರೆ ಅಷ್ಟು ಒಳ್ಳೆಯದು,ನೀರಿನ ಬಳಕೆ ಹೆಚ್ಚು ಇದ್ದರೆ ಆರ್ಥಿಕ ಸಮಸ್ಯೆ ಬರುವ ಅವಕಾಶವಿದೆ,ಅಗ್ನಿ ಜಲ ಎರಡು ಪರಸ್ಪರ ವಿರುದ್ಧ ಪದಗಳು.ಮನೆಯಲ್ಲಿ ಅಲ್ಮಾರಗಳು ಉತ್ತರ ಭಾಗದಲ್ಲಿದ್ದರೆ ಅದರಲ್ಲಿ ಬೇಕಾಗಿರುವ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳಬೇಕು.

ಮಿಕ್ಸಿ ,ಗ್ರೈಂಡರ್ ನಂತಹ ಎಲೆಕ್ಟ್ರಿಕ್ ವಸ್ತುಗಳನ್ನು ಅಡುಗೆ ಮನೆ ಉತ್ತರ ಭಾಗಕ್ಕೆ ಇಟ್ಟುಕೊಳ್ಳಬೇಕು.ಅಡುಗೆ ಮನೆಯಲ್ಲಿ ಫ್ರಿಡ್ಜ್ ಇಡದಿರುವುದು ಒಳ್ಳೆಯದು.ಅಡುಗೆ ಮನೆಯಲ್ಲಿ ಉಪ್ಪು,ಅರಿಶಿನ ಇರಬೇಕು.ಎಂತಹ ಅಡುಗೆ ಮಾಡಿದರೂ ಉಪ್ಪು ಇಲ್ಲದಿದ್ದರೆ ರುಚಿ ಇರಲ್ಲ.ಉಪ್ಪು ಇಲ್ಲದ ಅಡುಗೆ ಇಲ್ಲ ಹಾಗೆಯೇ ಉಪ್ಪಿನ ಬಗ್ಗೆ ಇರುವ ತುಂಬಾ ಆಚಾರಗಳು ನಮ್ಮ ಭಾರತದಲ್ಲಿ ಆಚರಿಸುತ್ತಾರೆ.

ಉಪ್ಪಿನಿಂದ ಮನೆಗೆ ಒಳ್ಳೆಯದು ಆಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ.ಒಂದು ವೇಳೆ ಮನೆಯಲ್ಲಿ ಉಪ್ಪು ಕಳ್ಳತನವಾದರೆ ಲಕ್ಷ್ಮೀದೇವಿ ಮನೆಯಿಂದ ಹೊರಕ್ಕೆ ಹೋಗುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಭಾವಿಸುತ್ತಾರೆ.ಅರಿಶಿನ ನಮ್ಮ ದೇಶದಲ್ಲಿ ಉನ್ನತ ವಸ್ತುವಾಗಿದೆ.ಅರಿಶಿನ ಕೊಂಬನ್ನು ವಿನಾಯಕ ವಿಗ್ರಹವಾಗಿ ಹೋಲಿಸುತ್ತಾರೆ.ಇದರಿಂದ ಮನೆಯಲ್ಲಿ ಶಾಂತಿ ಸಂತೋಷ ಇರುತ್ತದೆ.ಈ ಎರಡು ವಸ್ತುಗಳು ಲಕ್ಷ್ಮೀದೇವಿ ಹಾಗೆ ವಿನಾಯಕನಿಗೆ ಎಷ್ಟೋ ಪ್ರೀತಿಕರವಾಗಿದೆ.

ಈ ಉಪ್ಪು ಅರಿಶಿನವನ್ನು ಅಡುಗೆ ಮನೆಯಲ್ಲಿ ಒಟ್ಟಿಗೆ ಇಡಬಾರದು,ಹಾಗೇ ಇಟ್ಟರೆ ಮನೆಯಲ್ಲಿ ದಾರಿದ್ರ್ಯ ಬರುತ್ತದೆ.ಅದಕ್ಕೆ ಇದನ್ನು ಬೇರೆ ಬೇರೆ ಜಾಗದಲ್ಲಿ ಇಟ್ಟುಕೊಳ್ಳಬೇಕು.ಮನೆಯಲ್ಲಿ ಬಾಗಿಲಿಗೆ ಕನ್ನಡಿಯನ್ನು ಇಡಬಾರದು,ಪ್ರವೇಶ ದ್ವಾರದ ಹತ್ತಿರ ಅಡುಗೆ ಮನೆ ಇದ್ದರೆ ಕುಟುಂಬ ಸದಸ್ಯರಿಗೆ ಜೀರ್ಣ ಸಮಸ್ಯೆ ಹಾಗೂ ಆರೋಗ್ಯ ಸಮಸ್ಯೆ ಬರುತ್ತದೆ.ಅಡುಗೆ ಮನೆಯಲ್ಲಿ ಕರ್ಟನ್ಸ್ ಅಂತಹದ್ದನ್ನು ಉಪಯೋಗಿಸಬೇಕು.ಲಕ್ಷ್ಮೀದೇವಿ ಅನುಗ್ರಹ ಇರಬೇಕೆಂದರೆ ಉಪ್ಪು ಅರಿಶಿನವನ್ನು ದೂರವಿಡಬೇಕು ನಮ್ಮ ಸ್ಥಾಯಿಗೆ ತಕ್ಕ ಹಾಗೆ ಮನೆಯಲ್ಲಿ ಅಡುಗೆ ಮನೆಯನ್ನು ರೂಪಿಸಿಕೊಳ್ಳುತ್ತೇವೆ.ಆದರೆ ಮನೆಯಲ್ಲಿ ಅಡುಗೆ ಮನೆಯ ಆಗ್ನೇಯ ಭಾಗದಲ್ಲಿದೆ ಶುಭವಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ

LEAVE A REPLY

Please enter your comment!
Please enter your name here