ಮುರಡೇಶ್ವರ ದೇವಾಲಯದ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು!

0
13

“ಮುರುಡೇಶ್ವರ”ಮುರುಡೇಶ್ವರ ಉತ್ತರಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು .ಉತ್ತರ ಕನ್ನಡ ಜಿಲ್ಲೆಯ ಭಟ್ಕಳ್ಳ ತಾಲ್ಲೂಕಿಗೆ ಒಳಪಡುವ ಮುರುಡೇಶ್ವರಕ್ಕೆ ಎರಡು ವಿಶೇಷತೆಗಳಿವೆ.ಒಂದು ಭಕ್ತರನ್ನು ಸೆಳೆಯುವುದು ಮತ್ತೊಂದು ಸುಂದರವಾಗಿ ನಿರ್ಮಿಸಲಾದಂತಹ ದೇವಸ್ಥಾನ.ಮುರುಡೇಶ್ವರ ದೇವರು ಹಾಗೂ ಸುಂದರವಾಗಿ ನಿರ್ಮಿಸಲಾದ ದೇವಸ್ಥಾನದ ಸುತ್ತಮುತ್ತಲಿನ ತಾಣಗಳನ್ನು ಕಣ್ತುಂಬಿಸಿಕೊಳ್ಳಬೇಕಾದ್ರೆ ಸಮಯವೇ ಸಾಲುವುದಿಲ್ಲ.

ಮುರುಡೇಶ್ವರ ದೇವಾಲಯದ ಮುಂದೆ ಗೋಚರಿಸುವ ನಿಸರ್ಗದತ್ತ ವಿಶಾಲ ಸಮುದ್ರ ದೇವಾಲಯಕ್ಕೆ ಮತ್ತಷ್ಟು ವರ್ಚಸ್ಸನ್ನು ಇಮ್ಮಡಿಗೊಳಿಸಿದೆ.ಮುರುಡೇಶ್ವರ ಹಿಂದೂ ದೇವರಾದ ಪರಮೇಶ್ವರನ ಮತ್ತೊಂದು ಹೆಸರು ಇದಾಗಿದೆ .ಜಗತ್ತಿನ ಅತ್ಯಂತ ಎತ್ತರದ ಪರಮೇಶ್ವರನ ಪ್ರತಿಮೆಗೆ ಪ್ರಖ್ಯಾತವಾಗಿರುವ ಈ ಪಟ್ಟಣವು ಅರಬಿ ಸಮುದ್ರದ ತೀರದ ಮೇಲೆ ಇದ್ದು ,ಮುರುಡೇಶ್ವರ ದೇವಾಲಯಕ್ಕೆ ಕೂಡ ಇದು ಹೆಸರಾಗಿದೆ.

ಮಂಗಳೂರು ಮುಂಬೈ ಕೊಂಕಣ ರೈಲ್ವೇ ಮಾರ್ಗದಲ್ಲಿ ರೈಲ್ವೇ ನಿಲ್ದಾಣವನ್ನು ಮುರುಡೇಶ್ವರ ಹೊಂದಿದೆ.ಮುರುಡೇಶ್ವರವೂ ಆತ್ಮಲಿಂಗದ ಒಂದು ತುಣುಕು ಎಂಬ ಪ್ರತೀತಿ ಕೂಡ ಇದೆ.ರಾವಣ ತನ್ನ ತಪಸ್ಸಿನಿಂದ ಶಿವನನ್ನು ಒಲಿಸಿ ಆತ್ಮಲಿಂಗವನ್ನು ಪಡೆದುಕೊಂಡಾಗ ಗಣೇಶ ನಾವು ಒಂದು ಮಗುವಿನ ವೇಷವನ್ನು ಧರಿಸಿಕೊಂಡು ಬಂದು ಆತ್ಮಲಿಂಗವನ್ನು ಭುವಿಗಿಟ್ಟು ಬಿಡುತ್ತಾನೆ,ಆಗ ಭೂಮಿಗೆ ಅಂಟಿ ಹೋಗುವ ಆತ್ಮಲಿಂಗವನ್ನು ರಾವಣ ಕಿತ್ತು 5 ತುಂಡುಗಳನ್ನು ಮಾಡಿ ಎಸೆಯುತ್ತಾನೆ.

ಈ 5 ತುಂಡುಗಳಲ್ಲಿ ಈ ಮುರುಡೇಶ್ವರ ಲಿಂಗವೂ ಒಂದು ಎನ್ನುವ ನಂಬಿಕೆ ಈಗಲೂ ಇದೆ.ಹೀಗಾಗಿ ಮುರುಡೇಶ್ವರ ಶಿವಾಲಯ ಪ್ರಾಚೀನ ಕಾಲದಿಂದಲೂ ಪೌರಾಣಿಕವಾಗಿ ಪ್ರಸಿದ್ಧಿಯಾಗಿತ್ತು.ಮುರುಡೇಶ್ವರದಲ್ಲಿ ಶಿವನ ಲಿಂಗ ಇಟ್ಟು ಜೊತೆ ಏಷ್ಯಾದಲ್ಲಿ ಎರಡನೆಯ ಎತ್ತರದ ಶಿವನ ಪ್ರತಿಮೆ ಇದೆ ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜಗೋಪುರ ಕೂಡ ಇದೆ.ಸದ್ಯದಲ್ಲಿ ಇಲ್ಲಿ ರಾಮ ಲಕ್ಷ್ಮಣ ಮತ್ತು ಸೀತಾ ಪ್ರತಿಮೆಯ ರಾಮ ಮಂದಿರವನ್ನು ಮತ್ತು ಶನಿ ದೇವಾಲಯವನ್ನು ನಿರ್ಮಿಸಲಾಗಿದೆ .

ಆರ್ ಎನ್ ಶೆಟ್ಟಿ ಅವರ ನೇತೃತ್ವದಲ್ಲಿ ನಿರ್ಮಾಣವಾದಂತಹ ಈ ದೇವಾಲಯದ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯದ ವರ್ಣನೆ ಮಾಡಲು ಪದಗಳೇ ಸಾಲುವುದಿಲ್ಲ.ಶಿವನ ಮೂರ್ತಿ,ರಾಜಗೋಪುರ , ಭಗೀರಥ , ಶಿವ ಗಂಗಾ ದೇವಿಯರ ವಿಗ್ರಹ,ಸಮುದ್ರದ ನಡುವೆ ರೆಸಾರ್ಟ್,ಹೋಟೆಲ್ ಸೌಲಭ್ಯಗಳು ಹಾಗೂ ಪರಮೇಶ್ವರನ ದೇವಾಲಯವನ್ನು ಹೊಂದಿರುವಂತಹ ಈ ಪಟ್ಟಣವು ಯಾವುದೇ ಜನರನ್ನು ಆಕರ್ಷಿಸುವ ಸ್ಥಳವಾಗಿದೆ,ಈ ಪಟ್ಟಣವು ಮನಮೋಹಕವಾಗಿದೆ.

ರಾಷ್ಟ್ರೀಯ ಹೆದ್ದಾರಿಯಿಂದ ಊರನ್ನು ಪ್ರವೇಶಿಸುವಾಗ ಮಹಾದ್ವಾರವು ಕಲಾತ್ಮಕವಾಗಿದ್ದು, ದೇವಾಲಯದ ಬಳಿ ಸಾರಿದಂತೆ ಎರಡು ಆನೆಗಳು ಪ್ರವಾಸಿಗರ ಮನವನ್ನು ಸೆಳೆಯುತ್ತವೆ.ಇಲ್ಲಿನ ಸಮುದ್ರದಲ್ಲಿ ಜಲಕ್ರೀಡೆ ಆಡುವುದೇ ಒಂದು ಅನನ್ಯ ಅನುಭವ.ದೇವಾಲಯದ ಕಡಲ ತೀರದಲ್ಲಿ ನಿಂತು ವೀಕ್ಷಣೆ ಮಾಡಿದರೆ ನಮಗೆ ಶಿವ ರಾಜಗೋಪುರ ಮತ್ತು ಮುರುಡೇಶ್ವರ ಮಂದಿರ ಇತ್ಯಾದಿಗಳು ಕಡಲ ಜೊತೆಯಲ್ಲಿ ಕಣ್ಣಿಗೆ ರಂಜಿಸುತ್ತದೆ.

ಇನ್ನು ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದ ರಾವಣನಿಂದಲೇ ಇನ್ನು 4 ಲಿಂಗಗಳು ಈ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟವು ಎನ್ನುವುದು ಪುರಾಣದ ಕಥೆಯಾಗಿದೆ.ಇನ್ನಿತರ 4 ಕ್ಷೇತ್ರಗಳೆಂದರೆ ಮುರುಡೇಶ್ವರ,ಗುಣವಂತೇಶ್ವರ,ಧಾರೇಶ್ವರ , ಸಜ್ಜೇಶ್ವರ.ಮನಮೋಹಕವಾದ ಕಣ್ಮನ ತಣಿಸುವ ಸೂರ್ಯಾಸ್ತದ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲಾ.ಶ್ರೀ ಕೃಷ್ಣ ಅರ್ಜುನನಿಗೆ ಗೀತೋಪದೇಶವನ್ನು ಹೇಳುತ್ತಿರುವ ಬೃಹತ್ ಶಿಲ್ಪ ಇಲ್ಲಿದೆ.2008 ರಲ್ಲಿ ದ್ರಾವಿಡ ಶೈಲಿಯಲ್ಲಿ ಒಂದು ಗೋಪುರವನ್ನು ಕಟ್ಟಿದ್ದಾರೆ.ಗೋಪುರದ ಎತ್ತರ 249 ಅಡಿ.ಈ ಗೋಪುರ ಮುರುಡೇಶ್ವರ ದೇವಾಲಯದ ಬದಿಯಲ್ಲಿಯೇ ಇದೆ.

ಇನ್ನು ಇದು 20 ಅಂತಸ್ತು ಹೊಂದಿದ್ದು ಮೇಲಕ್ಕೆ ಹೋಗಲು ಲಿಫ್ಟ್ ಕೂಡ ವ್ಯವಸ್ಥೆ ಮಾಡಲಾಗಿದೆ.18 ನೇ ಮಹಡಿಯ ಕಿಟಕಿಯಲ್ಲಿ ನಿಂತು ಸೂರ್ಯಾಸ್ತ ಹಾಗೂ ಹೊರಗಿನ ನೈಸರ್ಗಿಕ ಸೌಂದರ್ಯವನ್ನು ನೋಡಲು ತುಂಬಾ ರಮಣೀಯವಾಗಿರುತ್ತದೆ.ಕೇವಲ ಪುಣ್ಯಕ್ಷೇತ್ರ ಮಾತ್ರವಾಗಿರದೆ ಮುರುಡೇಶ್ವರ ನನ್ನು ಒಂದು ಪ್ರೇಕ್ಷಣೆಯನ್ನಾಗಿ ಮಾಡಿದ್ದು ಶ್ರೀ ಆರ್ ಎನ್ ಶೆಟ್ಟಿ ಅವರು.

ದೇವಾಲಯದ ಸುತ್ತಮುತ್ತ ಸುಂದರ ಉದ್ಯಾನವನ ಮತ್ತು ಹಲವು ರಾಮಾಯಣ,ಮಹಾಭಾರತ ಪುರಾಣ ಪ್ರಸಿದ್ಧ ಕಥೆಗಳನ್ನು ಹೇಳುವಂತ ಪ್ರತಿಭೆಗಳನ್ನು ರಚಿಸಲಾಗಿದೆ.ಭಕ್ತರ ಈಡೇರಿಕೆಯನ್ನು ಪೂರೈಸುತ್ತಾ ಬಂದಿರುವ ಶಿವನ ಆತ್ಮಲಿಂಗವನ್ನು ಹೊಂದಿರುವ ಈ ಮುರುಡೇಶ್ವರದ ಮಹಿಮೆ ಹೇಳಲು ಆಗದು.ಈ ಪ್ರಸಿದ್ಧ ದೇವಾಲಯಕ್ಕೆ ಒಮ್ಮೆ ತಾವು ಸಹ ಭೇಟಿ ನೀಡಿ ನಿಮ್ಮ ಮನವನ್ನು ತಣಿಸಿಕೊಳ್ಳಿ.

ದೇವಾಲಯದ ಸುತ್ತಮುತ್ತಲಿನ ಈ ಎಲ್ಲ ಕಲಾಕೃತಿಗಳು ಉದ್ಯಾನವನವನ್ನೆಲ್ಲ ವೀಕ್ಷಿಸಿದ ನಂತರ ಸಮುದ್ರದ ದಂಡೆಗೆ ಹೋಗಬಹುದು .ಆಗ ಸಂಜೆ 5 : 30 ಆಗಿತ್ತು ಅಂದ್ರೆ ಸಮುದ್ರದ ತೀರ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ.ಅಲ್ಲಿಯೇ ಚುರುಮುರಿ,ಮಂಡಕ್ಕಿ ಖರೀದಿಸಿ ಸಮುದ್ರದಂಡೆಗೆ ಹೋಗಿ ನಿಂತು ಆ ಸೂರ್ಯಾಸ್ತದ ಖುಷಿ,ರಮ್ಯ ರಮಣೀಯ ದೃಶ್ಯ ಕಣ್ತುಂಬಿಸಿಕೊಳ್ಳಬಹುದು.ಉಕ್ಕಿ ಬರುತ್ತಿರುವ ತೆರೆಗಳು ಹತ್ತಿರ ಹೋಗಿ ನಿಂತರೆ ಸಾಕು ನಿಮ್ಮ ಪಾದವನ್ನು ಸ್ಪರ್ಶಿಸಿ ಮುತ್ತಿಕ್ಕುತ್ತವೆ.ನಾವು ನಿಂತ ಜಾಗವನ್ನೇ ತೊಳೆದುಕೊಂಡು ಹೋಗುತ್ತಿದ್ದ ಸಮುದ್ರದ ಅಲೆಗಳು ನಿಜವಾಗಿಯೂ ಮುರುಡೇಶ್ವರ ಪ್ರವಾಸ ಒಂದು ಸುಂದರ ಸುಮಧುರ ಅನುಭವವನ್ನು ನೀಡುತ್ತದೆ.

LEAVE A REPLY

Please enter your comment!
Please enter your name here