ಎಕ್ಕದ ಗಿಡದಲ್ಲಿ ಎಷ್ಟೊಂದು ಶಕ್ತಿಯುತ ಔಷಧೀಯ ಗುಣಗಳು ಇದೆ ಗೊತ್ತಾ!

0
6

ಎಕ್ಕದ ಗಿಡವು ಭಾರತದ ಎಲ್ಲ ಪ್ರದೇಶಗಳಲ್ಲಿ ಸಿಗುವಂತಹ ಹಾಗೂ ಬೆಳೆಯುವಂತಹ ಗಿಡವಾಗಿದೆ.ಎಕ್ಕವನ್ನು ಅರ್ಕವೆಂದು ಕೂಡ ಕರೆಯುತ್ತಾರೆ ಆದರೆ ಆಡುಭಾಷೆಯಲ್ಲಿ ಎಕ್ಕದ ಗಿಡ ಎಂದು ಕರೆಯುತ್ತಾರೆ.ಈ ಎಕ್ಕದ ಗಿಡದಲ್ಲಿ ಎರಡು ತರವಾದ ವಿಧಗಳಿವೆ,ಒಂದು ಬಿಳಿ ಬಣ್ಣದ್ದು ಇನ್ನೊಂದು ತಿಳಿ ನೇರಳೆ ಬಣ್ಣದ್ದು.ಇವೆರಡೂ ಒಂದೇ ಜಾತಿಯ ಗಿಡಗಳು ಹಾಗೂ ಇವೆರಡರಲ್ಲಿ ಕೂಡ ಔಷಧೀಯ ಗುಣಗಳು ಇರುತ್ತವೆ .

ಈ ಎಕ್ಕದ ಗಿಡಗಳು ಸಾಮಾನ್ಯವಾಗಿ ಖಾಲಿ ಜಾಗದಲ್ಲಿ ಮತ್ತು ಪಾಳು ಬಿದ್ದಿರುವ ಜಾಗದಲ್ಲಿ ಬೆಳೆಯುತ್ತವೆ.ಈ ಎಕ್ಕದ ಗಿಡಕ್ಕೆ ಸಸ್ಯಗಳಲ್ಲಿಯೇ ವಿಶೇಷವಾದ ಸ್ಥಾನವಿರುತ್ತದೆ.ತಾಂತ್ರಿಕ ಪ್ರಯೋಗಗಳಲ್ಲಿಯೂ ಸಹ ಅನೇಕ ರೀತಿಯಿಂದ ಎಕ್ಕದ ಗಿಡದ ಭಾಗಗಳನ್ನು ಉಪಯೋಗ ಮಾಡುತ್ತಾರೆ.ಈ ಗಿಡದ ಬೇರಿನಲ್ಲಿ ಗಣೇಶನ ಮೂರ್ತಿಯೂ ಕೂಡ ನಿರ್ಮಾಣವಾಗಿರುತ್ತದೆ.ಇದೊಂದು ಪ್ರಕೃತಿಯ ವಿಸ್ಮಯವೆಂದರೆ ತಪ್ಪಾಗುವುದಿಲ್ಲ
ಮತ್ತು ಗಣೇಶನ ಪೂಜೆಗೆ ಈ ಗಿಡದ ಹೂವು ಬಹಳ ಶ್ರೇಷ್ಠವೆಂದು ಭಾವಿಸಲಾಗುತ್ತದೆ.

ಎಕ್ಕದ ಗಿಡದಿಂದ ನಮಗೆ ಏನೆಲ್ಲಾ ಉಪಯೋಗವಿದೆ ಎಂದು ತಿಳಿಯೋಣ ಬನ್ನಿ.ಮುಖದ ಮೇಲೆ ಕಪ್ಪು ಚುಕ್ಕೆಗಳಿದ್ದರೆ ಅಥವಾ ಭಂಗು ಇದ್ದರೆ ಎಕ್ಕದ ಬೇರನ್ನು ನಿಂಬೆರಸದಲ್ಲಿ ತೈದು ಅದನ್ನು ಮೃದುವಾಗಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಬೇಗನೆ ಮುಖದಲ್ಲಿ ಇರುವ ಕಪ್ಪು ಚುಕ್ಕೆಗಳು ಹಾಗೂ ಭಂಗಿಗಳು ನಿವಾರಣೆಯಾಗುತ್ತದೆ.ಆದರೆ ಇದನ್ನು ಮುಖಕ್ಕೆ ಹಚ್ಚುವಾಗ ವಿಶೇಷವಾಗಿ ಗಮನವನ್ನು ನೀಡಬೇಕು ಈ ಎಕ್ಕದ ಗಿಡದ ರಸ ಅಥವಾ ಈ ಗಿಡದಿಂದ ಮಾಡಿರುವ ಯಾವುದೇ ಮದ್ದಾಗಿರಬಹುದು ಅದು ಕಣ್ಣಿಗೆ ತಾಗದಂತೆ ಎಚ್ಚರಿಕೆಯನ್ನು ವಹಿಸಬೇಕು.

ಈ ಎಕ್ಕದ ಎಲೆಯನ್ನು ಅಥವಾ ಕಾಂಡವನ್ನು ಮುರಿದರೆ ಅದರಲ್ಲಿ ಹಾಲು ಬರುತ್ತದೆ.ಯಾವಾಗ್ಲಾದ್ರೂ ಕಾಲಿಗೆ ಮುಳ್ಳು ಚುಚ್ಚಿದಾಗ ಆ ಹಾಲನ್ನು ಮುಳ್ಳು ಚುಚ್ಚಿರುವ ಜಾಗಕ್ಕೆ ಹಾಕುವುದರಿಂದ ಮುಳ್ಳು ಮೇಲಕ್ಕೆ ಬರುತ್ತದೆ.ಮುಳ್ಳು ನಿಧಾನವಾಗಿ ತೆಗೆದ ನಂತರ ಎಕ್ಕದ ಹಾಲನ್ನು ಆ ಜಾಗಕ್ಕೆ ಹಾಕುವುದರಿಂದ ಮುಳ್ಳಿನ ವಿಷದ ಬಾಧೆ ಕೂಡ ನಿವಾರಣೆಯಾಗುತ್ತದೆ.

ಸಕ್ಕರೆ ಕಾಯಿಲೆ ಇದ್ದವರಿಗೂ ಕೂಡ ಈ ಗಿಡದಿಂದ ಬಹಳ ಪ್ರಯೋಜನಕಾರಿಯಾಗಿದೆ.ಈ ಗಿಡದ ಎಲೆಗಳು ಸಕ್ಕರೆ ಕಾಯಿಲೆ ಇದ್ದವರಿಗೆ ಎಕ್ಕದ ಗಿಡದ ಎಲೆಗಳನ್ನು ತೆಗೆದುಕೊಂಡು ನಿಮ್ಮ ಪಾದಗಳ ಅಡಿಯಲ್ಲಿ ಹಿಮ್ಮುಖವಾಗಿ ಇಟ್ಟು ಸಾಕ್ಸನ್ನು ಧರಿಸಬೇಕು,ದಿನಪೂರ್ತಿ ಹಾಗೆಯೇ ಬಿಟ್ಟು ರಾತ್ರಿ ಅವುಗಳನ್ನು ತೆಗೆದು ಮಲಗಬೇಕು.ಈ ರೀತಿ ಪ್ರತಿನಿತ್ಯ ಮಾಡುತ್ತಾ ಬಂದರೆ ಒಂದು ವಾರ ಅಥವಾ ಒಂದಿಷ್ಟು ದಿನಗಳ ನಂತರ ಸಕ್ಕರೆ ಕಾಯಿಲೆ ಕಡಿಮೆ ಆಗುತ್ತಾ ಬರುತ್ತದೆ.ಸಕ್ಕರೆ ಅಂಶದ ಪ್ರಮಾಣ ರಕ್ತದಲ್ಲಿ ಕ್ರಮೇಣ ಕಡಿಮೆಯಾಗುತ್ತದೆ.ಇದು ಬಹಳ ಉಪಾಯಕಾರಿ ಮತ್ತು ಸುಲಭ ಮಾರ್ಗವಾಗಿದೆ.ನಿಮಗೆ ಯಾರಿಗಾದರೂ ಸಕ್ಕರೆ ಕಾಯಿಲೆ ಇದ್ದರೆ ಈ ಉಪಾಯವನ್ನು ಪಾಲಿಸಿ ನೋಡಿ .

ಮೂಲವ್ಯಾಧಿ ಇದ್ದರೆ,ಮೊಳಕೆ ಕೈಗೆ ತಾಕುತ್ತಾ ಇದ್ದರೆ ಈ ಎಕ್ಕದ ಹಾಲನ್ನು ತೆಗೆದುಕೊಂಡು ಅದಕ್ಕೆ ಒಂದಿಷ್ಟು ಅರಿಶಿಣವನ್ನು ಬೆರೆಸಿ ಮೊಳಕೆ ಇರುವ ಜಾಗಕ್ಕೆ ಇದನ್ನು ಲೇಪಿಸುವುದರಿಂದ ಬೇಗ ಗುಣಮುಖವಾಗುತ್ತದೆ ಎಂದು ನಂಬಿಕೆಯಿದೆ.ನಿಮಗೆ ಯಾವುದೇ ರೀತಿಯಾಗಿ ಕ್ರಿಮಿ ಕೀಟಗಳು ಕಡಿದಿದ್ರೆ ಅದರಿಂದ ನಿಮಗೆ ಉರಿ ಮತ್ತು ಊತ ಆಗಿದ್ರೆ ಈ ಎಕ್ಕದ ಹಾಲನ್ನು ಅದರ ಮೇಲೆ ಲೇಪಿಸುವುದರಿಂದ ಬೇಗನೆ ನಿಮಗೆ ಉಪಶಮನ ಆಗುತ್ತದೆ.ಈ ಗಿಡವು ನಿಮ್ಮ ಮನೆಯ ಹತ್ರ ಇದ್ರೆ ಯಾವಾಗಲೂ ನಿಮಗೆ ಪಾಸಿಟಿವ್ ಎನರ್ಜಿ ಇರುತ್ತದೆ.ಯಾರ ಮನೆಯಲ್ಲಿ ಈ ಗಿಡವು ಇರುತ್ತದೆಯೋ ಅವರಿಗಾಗಲಿ ಅಥವಾ ಅವರ ಮನೆಯವರಿಗಾಗಲಿ ಯಾವ ಕೆಟ್ಟ ದೃಷ್ಟಿಯೂ ತಗುಲುವುದಿಲ್ಲ,ಎಂತಹ ಮಾಟ ಮಂತ್ರ ಪ್ರಭಾವ ಕೂಡ ಮನೆ ಹತ್ರ ಸುಳಿಯುವುದಿಲ್ಲ.

LEAVE A REPLY

Please enter your comment!
Please enter your name here